ಮದುವೆ ಆಗೋ ಹುಡುಗನ ಬಗ್ಗೆ ಹೆಣ್ಣು ಏನೇನೆಲ್ಲಾ ಕನಸು ಕಂಡಿರ್ತಾಳೆ ಗೊತ್ತಾ??

Category : Business | Sub Category : India Posted on 2020-05-21 17:16:38


ಮದುವೆ ಆಗೋ ಹುಡುಗನ ಬಗ್ಗೆ ಹೆಣ್ಣು ಏನೇನೆಲ್ಲಾ ಕನಸು ಕಂಡಿರ್ತಾಳೆ ಗೊತ್ತಾ??


ಮದುವೆ ಆಗೋ ಹುಡುಗನ ಬಗ್ಗೆ ಹೆಣ್ಣು ಏನೇನೆಲ್ಲಾ ಕನಸು ಕಂಡಿರ್ತಾಳೆ ಗೊತ್ತಾ??

    2 ನಿಮಿಷ ಸಮಯವಿದ್ದರೆ ತಪ್ಪದೇ ಓದಿ..ಹೆಣ್ಣು ತಾನು ಮದುವೆಯಾಗುವ ಗಂಡಿನ ಬಗ್ಗೆ ಕಂಡ ಕನಸಿನ ಒಂದಿಷ್ಟು ಸಾಲುಗಳು ಇಲ್ಲಿವೆ ನೋಡಿ..ಸುಮಾರು 25 ವರ್ಷ ನನ್ನ ಸಾಕಿದವರ ನಾ ಬಿಟ್ಟು ಬರುತ್ತಿರುವೆ.. ನೀ ನನ್ನ ಸಾಕಿ ಸಲಹುವೆ ಎಂಬ ನಂಬಿಕೆಯಲ್ಲಿ ನಾನಿರುವೆ…ಬಡವನಾಗಿದ್ದರೂ ಪರವಾಗಿಲ್ಲ ಎನ್ನಲು ನಾ ಅಷ್ಟು ದೊಡ್ಡ ಮನಸ್ಸಿನವಳಲ್ಲ.ನನ್ನ ಮದುವೆಯಾಗುವವನು ಶ್ರೀಮಂತನಾಗಿಲ್ಲದಿದ್ದರೂ ಪರವಾಗಿಲ್ಲ..ಆದರೆ ಯಾರ ಬಳಿಯೂ ಕೈ ಒಡ್ಡದೇ ಸ್ವಾಭಿಮಾನಿಯಾಗಿ ಸಂಸಾರ ಸಾಕಿದರೆ ನನಗದೇ ಆನಂದ..ಪ್ರೀತಿ ವಿಷಯದಲಿ ಹೆಣ್ಣು ಮಕ್ಕಳು ತುಸು ಸೂಕ್ಷ್ಮ ಮನಸ್ಸಿನವರು.ಹುಚ್ಚಿ ಎಂದುಕೊಳ್ಳದ ಗಂಡ ಸಿಕ್ಕರೇ ಅವರೇ ಪುಣ್ಯವಂತರು..ನೀ ಒಬ್ಬ ಕಾಳಜಿ ತೋರಿಸಿದರೆ ಸಾಕೆನಗೆ.ನಿನ್ನ ಇಡೀ ಸಂಸಾರವನ್ನು ಪ್ರೀತಿಯಿಂದ ಕಾಪಾಡುವೆ ಮಗಳಂತೆ..ಯಾರಿಗಾಗಿಯೋ ನನ್ನ ದೂರ ತಳ್ಳಿ ನನ್ನ ಮನಸ್ಸಿಗೂ ನೋವು ಮಾಡಿ.. ನೀವು ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ..ಇಬ್ಬರೇ ಇದ್ದಾಗ ಒಮ್ಮೆ ಹೊಡೆದರೂ ಸಹಿಸಿಬಿಡುವೆ.ನನ್ನ ಗಂಡನಲ್ಲವೇ ಎಂದುಕೊಳ್ಳುವೆ..‌ ಆದರೆ ಅಪ್ಪಿ‌ತಪ್ಪಿಯೂ ಪರರ ಮುಂದೆ ದಯಮಾಡಿ ಅವಮಾನಿಸದಿರಿ.. ಹೆಣ್ಣಿಗೂ ಗೌರವವಿದೆಯೆಂದು ಎಂದಿಗೂ ಮರೆಯದಿರಿ..ಅತಿಯಾಗಿ ಪ್ರೀತಿಸುವೆ.ಆರೋಗ್ಯ ಕೆಟ್ಟರೆ ನಿಮ್ಮ ಕಾಳಜಿಗಾಗಿ ಹಾತೊರೆಯುವೆ.

ನನಗಂತ ಯಾರಿಹರು??
ತಾಯಿಯ ಬಿಟ್ಟರೆ ನೀವೇ ಅಲ್ಲವೇ ಆ ಪ್ರೀತಿಯ ತೋರಬೇಕಾದವರು..ಸುಖವಾಗಲಿ ದುಖಃ ವಾಗಲಿ ಜೊತೆಯಾಗಿ ನಾ ಬರುವೆ.ವಯಸ್ಸಾದಾಗ ಮಗುವಿನಂತೆ ನಾ ನೋಡಿಕೊಳ್ಳುವೆ..ಕೊನೆಯ ಆಸೆ ಇದು ನನ್ನದು ಸರಿಯಾಗಿ ಕೇಳಿಸಿಕೊಳ್ಳಿ.ನಿಮ್ಮ ಎದೆಗೆ ಒರಗಿ ಪ್ರಾಣಬಿಟ್ಟರೆ ಅದಕ್ಕಿಂತ ಪುಣ್ಯ ಬೇರೆ ಏನಿಹುದು ಜೀವನದಲ್ಲಿ.ಕೊನೆಯಲ್ಲಿ‌ ನನ್ನದೊಂದು ಮಾತು..ಸಂಸಾರವೆಂಬುದು ಮೀನು ಹಾಗೂ ನೀರಿನಂತಿರಬೇಕೆ ಹೊರತು. ಮೀನು ಹಾಗೂ ಮೀನುಗಾರನಂತಲ್ಲ..ಹೆಣ್ಣು ಮೀನಾಗಿ.. ಗಂಡು ಮೀನುಗಾರನಾದರೆ.. ಅಲ್ಲಿ ಪ್ರೀತಿ ಇರಲು ಸಾಧ್ಯವೇ??ಹೆಣ್ಣು ಮೀನಾದರೆ ಗಂಡು ನೀರಿನಂತೆ.. ಒಬ್ಬರನೊಬ್ಬರು ಬಿಟ್ಟಿರಲು ಸಾಧ್ಯವೇ??

Leave a Comment: